Monday, October 4, 2010

ಹಪಹಪಿ ಮನಸ್ಸಿನ ಹೊಯ್ದಾಟ...



ಬದುಕು ಅಂದ್ರೆನೇ ಹೀಗೆ. ವಿಶಾಲ ವಿಸ್ತೃತ ಜಗತ್ತಿನ ಹಾಗೆ. ಕಲಿಯುವುದು ಕಲಿಯಬೇಕಾದದ್ದು, ಕಲಿತಿದ್ದನ್ನು ಅರಿಯಬೇಕಾದದ್ದು ಬೇಕಾದಷ್ಟಿದೆ!
ಇಲ್ಲಿ ನಿತ್ಯ ಸಾವಿನ ಮನೆಯ ಬಾಗಿಲ ಬಳಿ ಕಾದು ಕೂರುವ ಮಂದಿ ಲೆಕ್ಕದಲ್ಲಿಲ್ಲ. ನೋವಿನ ಹಜಾರದಲ್ಲಿ ಕೂತು ಎಲ್ಲ ಮರೆತವರಂತೆ ಹರಟುವ ಮಂದಿ ಗಣನೆಗೆ ಸಿಗುವುದಿಲ್ಲ. ಎಲ್ಲರು ಮನದಾಳದಲ್ಲಿ ಅವಿತಿರುವ ಭಾವಗಳನ್ನು ಒಮ್ಮೆ ಸಿಂಹಾವಲೋಕನ ಮಾಡಿದರೆ, ಮತ್ತದೇ ಹತಾಶೆ, ಅಪರೂಪಕ್ಕೊಮ್ಮೆ ಸಂಭ್ರಮಿಸಿದ ಕ್ಷಣ, ಬಿಡುವಿಲ್ಲದೆ ಕಾಡಿದ ನೋವು, ಎಂದೋ ಗಗನದಲ್ಲಿ ತೇಲಿಸಿದ ಆನಂದ, ಮರೆಯಲಾರದ ನೆನಪು, ಪ್ರೀತಿಯ ಪರಿತಾಪ, ಕಳೆದುಕೊಂಡಾಗ ಪಟ್ಟ ಸಂಕಟ, ಪಡೆಯಲೆತ್ನಿಸಿದಾಗ ಆದ ನಿರಾಸೆ...
ಇಲ್ಲ! ಹೀಗೇ ಬದುಕಬೇಕೆಂದು ತೆಗೆದುಕೊಂಡ ನಿರ್ಧಾರ. ಮತ್ತೆ ಬದಲಾಯಿಸುವ ಅಸಹಾಯಕತೆ. ಅಡ್ವಿಟ್ರ್ರೂ ಬಿಡ್ಗಾಸು ಬೆಲೆ ಸಿಗದ ಸ್ವಾಬಿsಮಾನ. ಹೀಗೆಲ್ಲಾ ಆಯಿತಲ್ಲವೆಂಬ ಮಹಾದಾಲೋಚನೆ. ಎಲ್ಲಿಂದಲೋ ಹೊರ ಬಂದ ಶಬ್ದಗಳು ಒಂದೊಂದಾಗಿ ಅಪ್ಪಿ ಹೂಮಾಲೆಯಾಗಿ ಮನಸ್ಸಿಗೆ ಸ್ವಲ್ಪ ಸಮಾಧಾನ ನೀಡಬಹುದೆನ್ನಬಹುದೇ?
‘ಸುಖ ಎಂಬುದು ದೇವರು ಕೊಟ್ಟ ಪ್ರಸಾದವಾದರೆ, ಕಷ್ಟ ದೇವರು ಕೊಟ್ಟ ಮಹಾಪ್ರಸಾದವಂತೆ’ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಈ ಸುಖ-ದುಃಖದ ಪ್ರಸಾದ-ಮಹಾಪ್ರಸಾದವನ್ನು ಸ್ವೀಕರಿಸದೇ ವಿದಿsಯೇ ಇಲ್ಲ. ಸ್ವೀಕರಿಸದಿದ್ದರೆ ಬದುಕಿಗೆ ಅರ್ಥವಿಲ್ಲ. ತಪ್ಪಿಸಿಕೊಳ್ಳುವುದಂತೂ ಖಂಡಿತಾ ಸಾಧ್ಯವಿಲ್ಲ ಅಲ್ಲವೇ?
ಬದುಕಿನ ಗಾದಿಯಲ್ಲಿ ಎಡರುತೊಡರುಗಳು ಬಹಳಷ್ಟಿವೆ. ಜಾಗರೂಕರಾಗಿದ್ದರೂ ಬರುವ ಏರುಪೇರುಗಳಿಗೆ ಸೋಲಪ್ಪುತ್ತದೆ. ಹಾಗೆಂದು ಸುಮ್ಮನೆ ಕೂರುವ ಮನಸ್ಥಿತಿ ನಮ್ಮದಲ್ಲವಲ್ಲ. ‘ಪರಿವರ್ತನೆ ಜಗದ ನಿಯಮ’ ಎಂಬ ಭಗವದ್ಗೀತೆಯ ಶ್ರೀಕೃಷ್ಣನ ನಿಯಮವನ್ನೊಮ್ಮೆ ಪುನರ್ ಮನನ ಮಾಡಿ ಅದರ ತದ್ವಿರುದ್ಧದಲ್ಲಿ ಆನಂದ ಪಡುವ ವಿಕೃತ ಮನಸ್ಸುಗಳೂ ನಮ್ಮ ನಡುವೆ ಇವೆ. ಪರಿವರ್ತನೆಯನ್ನು ತನ್ನ ಸುಖಾಂಕ್ಷೆಗೆ ತಕ್ಕಂತೆ ವರ್ತಿಸುತ್ತದೆ ಹೊರತು ಶ್ರೀಕೃಷ್ಣನ ನಿಯಮದಂತಲ್ಲ. ಬದುಕಿಗೆ ಎದುರಾಗುವ ದೌರ್ಬಲ್ಯಗಳು ಮನಸ್ಸನ್ನು ಹಿಮ್ಮಡಿಸುತ್ತವೆ ದಿಟ. ಹಾಗೆಂದು ತನ್ನೊಳಗಿನ ನಿಜಬಣ್ಣವನ್ನು ಕೊಂದು ಬದುಕುವವರ ನಡುವೆ ಬದುಕಬೇಕೆಂಬ ಮಹಾದಾಸೆ ಜೀವಂತವಾಗಿರಿಸಿದ ಮನಸ್ಸುಗಳ್ಳುವವರ ಬದುಕು ಸಾರ್ಥಕತೆ ಕಾಣುತ್ತದೆಯಲ್ಲವೇ?
ಭಾವನೆಗಳನ್ನು ಬಂಡವಾಳ ಮಾಡಿಕೊಂಡು ಬದುಕುವವರಿಗೇನೂ ಇಲ್ಲಿ ಕಮ್ಮಿಯಿಲ್ಲ. ಸಹನೆಯಿಂದ ಕೇಳಿ, ಪ್ರೀತಿ ತೋರುವಂತೆ ನಟಿಸಿ ಅದ್ಭುತ ಕಲಾಪ್ರೌಡಿಮೆ ಮೆರೆಯುತ್ತಾರೆ. ಇಂಥವರ ಮಧ್ಯೆ ಬದುಕು
ಸ್ರವಿಸುವುದು ಸುಲಭದ ಮಾತಲ್ಲ. ಒಮ್ಮೊಮ್ಮೆ ತೀರಾ ಸಂಕಷ್ಟವನ್ನು ಕೂಡ ಅನುಭವಿಸಬೇಕಾದಿತು. ಆ ಸಂದರ್ಭದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದೇ ಹಲವರ ಜಿಜ್ಞಾಸೆ.
ನನ್ನದೂ ಕೂಡ?

2 comments:

  1. ನನಗ್ಗೇನು ಅಥ೵ವಾಗಿಲ್ಲ. ಏಕೆಂದರೆ ನನಗೆ ಕನ್ನಡ ಬರೋದಿಲ್ಲ....!

    ReplyDelete

ನಿಮಗನ್ನಿಸಿದ್ದು..