Monday, October 4, 2010

ಹಪಹಪಿ ಮನಸ್ಸಿನ ಹೊಯ್ದಾಟ...



ಬದುಕು ಅಂದ್ರೆನೇ ಹೀಗೆ. ವಿಶಾಲ ವಿಸ್ತೃತ ಜಗತ್ತಿನ ಹಾಗೆ. ಕಲಿಯುವುದು ಕಲಿಯಬೇಕಾದದ್ದು, ಕಲಿತಿದ್ದನ್ನು ಅರಿಯಬೇಕಾದದ್ದು ಬೇಕಾದಷ್ಟಿದೆ!
ಇಲ್ಲಿ ನಿತ್ಯ ಸಾವಿನ ಮನೆಯ ಬಾಗಿಲ ಬಳಿ ಕಾದು ಕೂರುವ ಮಂದಿ ಲೆಕ್ಕದಲ್ಲಿಲ್ಲ. ನೋವಿನ ಹಜಾರದಲ್ಲಿ ಕೂತು ಎಲ್ಲ ಮರೆತವರಂತೆ ಹರಟುವ ಮಂದಿ ಗಣನೆಗೆ ಸಿಗುವುದಿಲ್ಲ. ಎಲ್ಲರು ಮನದಾಳದಲ್ಲಿ ಅವಿತಿರುವ ಭಾವಗಳನ್ನು ಒಮ್ಮೆ ಸಿಂಹಾವಲೋಕನ ಮಾಡಿದರೆ, ಮತ್ತದೇ ಹತಾಶೆ, ಅಪರೂಪಕ್ಕೊಮ್ಮೆ ಸಂಭ್ರಮಿಸಿದ ಕ್ಷಣ, ಬಿಡುವಿಲ್ಲದೆ ಕಾಡಿದ ನೋವು, ಎಂದೋ ಗಗನದಲ್ಲಿ ತೇಲಿಸಿದ ಆನಂದ, ಮರೆಯಲಾರದ ನೆನಪು, ಪ್ರೀತಿಯ ಪರಿತಾಪ, ಕಳೆದುಕೊಂಡಾಗ ಪಟ್ಟ ಸಂಕಟ, ಪಡೆಯಲೆತ್ನಿಸಿದಾಗ ಆದ ನಿರಾಸೆ...
ಇಲ್ಲ! ಹೀಗೇ ಬದುಕಬೇಕೆಂದು ತೆಗೆದುಕೊಂಡ ನಿರ್ಧಾರ. ಮತ್ತೆ ಬದಲಾಯಿಸುವ ಅಸಹಾಯಕತೆ. ಅಡ್ವಿಟ್ರ್ರೂ ಬಿಡ್ಗಾಸು ಬೆಲೆ ಸಿಗದ ಸ್ವಾಬಿsಮಾನ. ಹೀಗೆಲ್ಲಾ ಆಯಿತಲ್ಲವೆಂಬ ಮಹಾದಾಲೋಚನೆ. ಎಲ್ಲಿಂದಲೋ ಹೊರ ಬಂದ ಶಬ್ದಗಳು ಒಂದೊಂದಾಗಿ ಅಪ್ಪಿ ಹೂಮಾಲೆಯಾಗಿ ಮನಸ್ಸಿಗೆ ಸ್ವಲ್ಪ ಸಮಾಧಾನ ನೀಡಬಹುದೆನ್ನಬಹುದೇ?
‘ಸುಖ ಎಂಬುದು ದೇವರು ಕೊಟ್ಟ ಪ್ರಸಾದವಾದರೆ, ಕಷ್ಟ ದೇವರು ಕೊಟ್ಟ ಮಹಾಪ್ರಸಾದವಂತೆ’ ಎಂದು ಶಂಕರಾಚಾರ್ಯರು ಹೇಳಿದ್ದಾರೆ. ಈ ಸುಖ-ದುಃಖದ ಪ್ರಸಾದ-ಮಹಾಪ್ರಸಾದವನ್ನು ಸ್ವೀಕರಿಸದೇ ವಿದಿsಯೇ ಇಲ್ಲ. ಸ್ವೀಕರಿಸದಿದ್ದರೆ ಬದುಕಿಗೆ ಅರ್ಥವಿಲ್ಲ. ತಪ್ಪಿಸಿಕೊಳ್ಳುವುದಂತೂ ಖಂಡಿತಾ ಸಾಧ್ಯವಿಲ್ಲ ಅಲ್ಲವೇ?
ಬದುಕಿನ ಗಾದಿಯಲ್ಲಿ ಎಡರುತೊಡರುಗಳು ಬಹಳಷ್ಟಿವೆ. ಜಾಗರೂಕರಾಗಿದ್ದರೂ ಬರುವ ಏರುಪೇರುಗಳಿಗೆ ಸೋಲಪ್ಪುತ್ತದೆ. ಹಾಗೆಂದು ಸುಮ್ಮನೆ ಕೂರುವ ಮನಸ್ಥಿತಿ ನಮ್ಮದಲ್ಲವಲ್ಲ. ‘ಪರಿವರ್ತನೆ ಜಗದ ನಿಯಮ’ ಎಂಬ ಭಗವದ್ಗೀತೆಯ ಶ್ರೀಕೃಷ್ಣನ ನಿಯಮವನ್ನೊಮ್ಮೆ ಪುನರ್ ಮನನ ಮಾಡಿ ಅದರ ತದ್ವಿರುದ್ಧದಲ್ಲಿ ಆನಂದ ಪಡುವ ವಿಕೃತ ಮನಸ್ಸುಗಳೂ ನಮ್ಮ ನಡುವೆ ಇವೆ. ಪರಿವರ್ತನೆಯನ್ನು ತನ್ನ ಸುಖಾಂಕ್ಷೆಗೆ ತಕ್ಕಂತೆ ವರ್ತಿಸುತ್ತದೆ ಹೊರತು ಶ್ರೀಕೃಷ್ಣನ ನಿಯಮದಂತಲ್ಲ. ಬದುಕಿಗೆ ಎದುರಾಗುವ ದೌರ್ಬಲ್ಯಗಳು ಮನಸ್ಸನ್ನು ಹಿಮ್ಮಡಿಸುತ್ತವೆ ದಿಟ. ಹಾಗೆಂದು ತನ್ನೊಳಗಿನ ನಿಜಬಣ್ಣವನ್ನು ಕೊಂದು ಬದುಕುವವರ ನಡುವೆ ಬದುಕಬೇಕೆಂಬ ಮಹಾದಾಸೆ ಜೀವಂತವಾಗಿರಿಸಿದ ಮನಸ್ಸುಗಳ್ಳುವವರ ಬದುಕು ಸಾರ್ಥಕತೆ ಕಾಣುತ್ತದೆಯಲ್ಲವೇ?
ಭಾವನೆಗಳನ್ನು ಬಂಡವಾಳ ಮಾಡಿಕೊಂಡು ಬದುಕುವವರಿಗೇನೂ ಇಲ್ಲಿ ಕಮ್ಮಿಯಿಲ್ಲ. ಸಹನೆಯಿಂದ ಕೇಳಿ, ಪ್ರೀತಿ ತೋರುವಂತೆ ನಟಿಸಿ ಅದ್ಭುತ ಕಲಾಪ್ರೌಡಿಮೆ ಮೆರೆಯುತ್ತಾರೆ. ಇಂಥವರ ಮಧ್ಯೆ ಬದುಕು
ಸ್ರವಿಸುವುದು ಸುಲಭದ ಮಾತಲ್ಲ. ಒಮ್ಮೊಮ್ಮೆ ತೀರಾ ಸಂಕಷ್ಟವನ್ನು ಕೂಡ ಅನುಭವಿಸಬೇಕಾದಿತು. ಆ ಸಂದರ್ಭದಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂಬುದೇ ಹಲವರ ಜಿಜ್ಞಾಸೆ.
ನನ್ನದೂ ಕೂಡ?

Tuesday, September 14, 2010

Saturday, August 29, 2009

ನಿವೇದನೆ


ನನ್ನ ನೆನಪು
ಬಾರದಿರಲಿ
ನಿನ್ನ ಹರುಷದ ಹೊನಲಲಿ...
Because
ನಾ ಎಲ್ಲಿ ಕಳೆಗುಂದಿಬಿಡುವೆನೆಂಬ ಭಯ!

Saturday, August 15, 2009

ದೇಶಭಕ್ತಿಯ ಪ್ರತೀಕ ಭಗತ್ ಸಿಂಗ್!


ವಯಸ್ಸು ೨೩!
ಸಾವಿನ ಮನೆಯ ಬಾಗಿಲ ಬಳಿ ರುಜು ಹಾಕಲು ನಿಂತಿದ್ದಾನೆ. ಯಾವುದೇ ಆತಂಕದ ಛಾಯೆಯಿಲ್ಲ . ನಿರ್ಭೀಢನಾಗಿ ನಿಂತಿದ್ದಾನೆ. ನಗುನಗುತ್ತ ಗಲ್ಲುಗಂಬಕ್ಕೇರಲು ಸಿದ್ಧನಾಗಿದ್ದಾನೆ. ಎಲ್ಲರೂ ಒಂದು ದಿನ ಸಾಯಲೇಬೇಕು. ಆದರೆ ಒಳ್ಳೆಯ ಸಾವು ಎಂದರೆ ಜಗತ್ತು ನೆನಪಿಟ್ಟುಕೊಳ್ಳಬೇಕಾದದ್ದು ಎಂದು ಅವನ ತಾಯಿ ಹೇಳಿಕೆ. ಅದು ಇನ್ನಷ್ಟು ಧೈರ್ಯ ತುಂಬಲು ಕಾರಣವಾಗಿತ್ತು.
ಅವನು ಮಧ್ಯದಲ್ಲಿದ್ದಾನೆ. ಇನ್ನಿಬ್ಬರು ಜೊತೆಗಾರರು ಕೂಡ ತಮ್ಮ ಕೊನೆ ಘಳಿಗೆಯ ಸಮಾಪ್ತಿಗೆ ರುಜು ಹಾಕಲು ಅವನ ಪಕ್ಕದಲ್ಲಿ ಹಲಗೆಯ ಮೇಲೆ ಮಂದಹಾಸ ಬೀರುತ್ತಾ ಬಂದು ನಿಂತರು. ಸಾವಿಗೆ ಹೆದರುವ ಲಕ್ಷಣಗಳೇ ಕಾಣುತ್ತಿಲ್ಲ. ಸಂಭಮದಿಂದ ಸಾವನ್ನೇ ಎದುರು ನೋಡುತ್ತಿದ್ದಾರೆ.
ಮೂವರು ತಮ್ಮ ಮುಂದಿದ್ದ ಹಗ್ಗಕ್ಕೆ ಚುಂಬಿಸಿದರು. ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ವೀರ ಘೋಷಣೆ ಅವರ ಬಾಯಿಂದ ಪ್ರತಿಧ್ವನಿಸುತ್ತಿತ್ತು. ಹಗ್ಗವನ್ನು ಕತ್ತಿನ ಸುತ್ತಲಾಯಿತು. ಕೈ ಕಾಲುಗಳನ್ನು ಕಟ್ಟಿದರು. ಹಗ್ಗವನ್ನು ಎಳೆದರು. ಕಾಲಿನ ಅಡಿಯಲಿದ್ದ ಹಲಗೆ ತೆರೆದುಕೊಂಡಿತು. ಅವರು ಕೂಗುತ್ತಿದ್ದ ವೀರ ಘೋಷ ಅವರ ಅಂತರಾತ್ಮದಿಂದ ಕೊನೆಗೊಂಡಿತು. ‘ಕ್ರಾಂತಿ ಚಿರಾಯುವಾಯಿತು.’
‘ಭಗತ್‌ಸಿಂಗ್, ರಾಜ್‌ಗುರು, ಸುಖದೇವ್’ ಈ ಮೂವರು ಕಾಂತ್ರಿಕಾರಿಗಳು ಗಲ್ಲುಗಂಭಕ್ಕೇರಿ, ಸಾವನ್ನಪ್ಪಿದರು.
‘ಭಗತ್, ಭಗತ್‌ಸಿಂಗ್’ ಎಂದು ಒಮ್ಮೆ ಉದ್ಗರಿಸಿದರೆ ಮೈಮನದಲ್ಲಿ ವಿದ್ಯುತ್ ಸಂಚಾರ. ಯುವಜನತೆಯ ಆದರ್ಶಪ್ರಿಯ, ಯುವ ಚೈತನ್ಯಕ್ಕೆ ಸ್ಫೂರ್ತಿಯ ಚಿಲುಮೆ, ಉತ್ತಮ ಮಾರ್ಗದರ್ಶಕ, ಕ್ರಾಂತಿಯ ಹರಿಕಾರ ಮತ್ತು ದೇಶಭಕ್ತಿಗೆ ಇನ್ನೊಂದು ಹೆಸರು.
ಬರಿ ಹಿಂಸೆ, ರಕ್ತದೋಕುಳಿ, ಜೀವಗಳ ಜೊತೆಗಿನ ಜೂಟಾಟಗಳು ಕ್ರಾಂತಿಯಲ್ಲ. ಕಾಂತಿಯೆಂದರೆ ಉತ್ಥಾನವ ಅಲ್ಲ. ಕ್ರಾಂತಿಯೆಂದರೆ ಸಮಾಜವನ್ನು ವ್ಯವಸ್ಥಿತವಾಗಿ ಪುನರ್ ರೂಪಿಸುವ ಕಾರ್ಯಕಮ. ಪುನರ್ ರೂಪಿಸುವ ಸಂದರ್ಭದಲ್ಲಿ ಇರುವ ವ್ಯವಸ್ಥೆಯನ್ನು ಸಂಪರ್ಣವಾಗಿ ನಾಶ ಮಾಡಿ ನವ ನಿರ್ಮಾಣದ ತಳಹದಿಯ ಮೇಲೆ ರೂಪಿಸಬೇಕಾಗುತ್ತದೆ ಎಂದು ಭಗತ್‌ಸಿಂಗ್ ಕಾಂತ್ರಿಯ ಸ್ವರೂಪವನ್ನು ವಿವರಿಸಿದ್ದ.
ಆಂಗ್ಲರ ಆಡಳಿತದ ಗುಲಾಮಗಿರಿಯಲ್ಲಿದ್ದ ಭಾರತವನ್ನು ವಿಮುಕ್ತಿಗೊಳಿಸುವ ಸಲುವಾಗಿ ಅತಿ ಕಿರಿಯ ವಯಸ್ಸಿನಲ್ಲಿಯೇ ದೇಶಕ್ಕಾಗಿ ಹೋರಾಡುವ ಸಂಕಲ್ಪವನ್ನು ಭಗತ್ ಸಿಂಗ್ ಹೊಂದಿದ್ದ.
ಭಗತ್ ಹುಟ್ಟಿದ್ದು ೧೯೦೭ ಸೆಪ್ಟೆಂಬರ್ ೨೮ರಂದು. ಪಂಜಾಬಿನ ಲಾಯರ್‌ಪುರ ಜಿಲ್ಲೆಯ ಬಾಂಗ್ರಾ ಎಂಬ ಗಾಮದಲ್ಲಿ. ಸ್ವಾತಂತ್ರ್ಯ ಹೋರಾಟದ ಮನೋಭಾವವುಳ್ಳ ಕುಟುಂಬದಲ್ಲಿದ್ದ ಭಗತ್‌ಗೆ ಸ್ವಾತಂತ್ರ್ಯದ ಕಿಚ್ಚು ಕರಗತವಾಗಿಯೇ ಬಂದಿತ್ತು. ಆಂಗ್ಲರನ್ನು ಭಾರತದಿಂದ ಓಡಿಸುವುದಲ್ಲದೇ ದೇಶದಲ್ಲಿ ಹೊಸ ಸೃಷ್ಟಿಯನ್ನು ನಿರ್ಮಿಸಿ, ಹೊಸ ರೂಪುರೇಷೆಗಳನ್ನು ಜಾರಿ ತರುವ ಕನಸು ಕಂಡಿದ್ದನು.
ತಂದೆ ಸರ್ದಾರ್ ಕಿಶನ್‌ಸಿಂಗ್. ಸ್ವಾತಂತ ಹೋರಾಟಗಾರರು. ಮಗನ ಈ ಸ್ವಾತಂತ ಕಿಚ್ಚು ಕಂಡು ಬೆರಗಾಗಿದ್ದರು. ಮಗನನ್ನು ಕಾಪಾಡಲು ಎಷ್ಟೇ ಪಯತ್ನ ಪಟ್ಟರು ಸಾಧ್ಯವಾಗದೇ ಹುಷಾರಾಗಿರು ಎಂದು ತಿಳಿ ಹೇಳಿ ಭಗತ್‌ನ ಕಾರ್ಯಕ್ಕೆ ನೆರವಾದರು.
ತಾಯಿ ವಿದ್ಯಾವತಿದೇವಿ. ಮಗನೆಂದರೆ ಪಾಣ. ಚಿಕ್ಕಪ್ಪ ಅಜಿತ್‌ಸಿಂಗ್ ತನ್ನ ಬೆಂಕಿಯುಗುಳುವ ಭಾಷಣಗಳಿಂದ, ಸರ್ಕಾರದ ಎದೆ ನಡುಗಿಸುವ ಕೃತಿಗಳಿಂದ ಆಂಗ್ಲರಿಗೆ ಸಿಂಹಸ್ವಪ್ನನಾಗಿದ್ದ. ಇದರ ಪರಿಣಾಮ ಮಾಂಡಲೆ ಜೈಲಿಗೆ ಸೇರಿದ್ದ. ಇನ್ನೊಬ್ಬ ಚಿಕ್ಕಪ್ಪ ಸ್ವರಣ್‌ಸಿಂಗ್ ಕೂಡ ಜೈಲಿನಲ್ಲಿದ್ದ.
೧೨ನೇ ವಯಸ್ಸಿವನಾಗಿದ್ದ ಭಗತ್, ಲಾಹೋರಿನ ಡಿ.ಎ.ವಿ. ಶಾಲೆಯಲ್ಲಿ ಓದುತ್ತಿದ್ದ ಸಂಸ್ಕೃತಿ, ಇಂಗ್ಲೀಷ್, ಉರ್ದು ವಿಷಯಗಳನ್ನು ಚೆನ್ನಾಗಿ ಕಲಿಯುತ್ತಿದ್ದ. ಒಮ್ಮೆ ೧೯೧೯ರ ಜಲಿಯನ್ ವಾಲಾಬಾಗ್‌ನಲ್ಲಿ ನಡೆದ ಭಾರಿ ದುರಂತದ ಎಲ್ಲ ವಿವರಗಳನ್ನು ಓದಿದ ಅವನ ಮನಸ್ಸು ಅಸ್ವಸ್ಥಗೊಂಡಿತು.
೧೯೧೯ರ ಏಪ್ರಿಲ್ ೧೩ರ ಅಂದಿನ ಪಂಜಾಬಿನ ಲೆಪಿsನೆಂಟ್ ಗವರ್ನರ್ ಮೈಖೇಲ್ ಓ ಡಾಯರ್. ಅವನ ಬಲಗೈ ಬಂಟ ಜನರಲ್ ಡೈಯೆರ್. ಅಮೃತಸರವನ್ನು ನಿಯಂತ್ರಣದಲ್ಲಿಡಲು ಮೈಖೇಲ್ ಓ ಡಾಯರ್ ಡೈಯೆರ್‌ನ ನೇಮಿಸಿದ್ದ. ಏಪ್ರಿಲ್ ೧೩ರ ಹಿಂದಿನ ದಿನ ಶ್ರೀರಾಮನವಮಿ ಹಬ್ಬ. ಅಂದು ದೇಶದಲ್ಲಿ ಅನೇಕ ಕಾಂಗೆಸ್ ನಾಯಕರನ್ನು ಆಂಗ್ಲ ಸರಕಾರ ಬಂದಿsಸಿತ್ತು. ಅಮೃತಸರದ ಗೌರವಾನ್ವಿತ ನಾಯಕ ಡಾಕ್ಟರ್ ಸತ್ಯಪಾಲ್ ಹಾಗು ಸೈಫುದ್ದೀನ್ ಕಿಚ್ಲೂರ್‌ರನ್ನು ಬಂದಿsಸಿ ಗಡಿಪಾರು ಮಾಡಿತ್ತು. ಸ್ವಯಂ ಸ್ಪೂರ್ತಿಯಿಂದ ಅಮೃತಸರದ ಜನತೆ ಇದನ್ನು ಪತಿಭಟಿಸಲು ನಿರ್ಧರಿಸಿತು. ರೌಲಟ್ ಕಾಯ್ದೆ ಪಕಾರ ಸ್ವಾತಂತ ಯೋಧರನ್ನು ರಾಜದ್ರೋಹಿಗಳೆಂದು ಕರೆದು ಉಗ ಶಿಕ್ಷೆ ನೀಡುತ್ತಿದ್ದನ್ನು ಈ ಸಭೆ ಪತಿಭಟಿಸಿತು.
ಜನರಲ್ ಡೈಯೆರ್ ‘ಭಾರತೀಯರಿಗೆ ಸರಿಯಾದ ಪಾಠ ಕಲಿಸುತ್ತೇನೆ’ ಎಂದು ಘೋಷಿಸಿ ತನ್ನ ಸೈನಿಕ ಪಡೆಯೊಂದಿಗೆ ಹೋಗಿ ಸಭೆಯಲ್ಲಿದ್ದ ಸುಮಾರು ೨೦ ಸಾವಿರ ನಿಶ್ಯಸ್ತ್ರರಾಗಿದ್ದ ನಿಷ್ಪಾಪಿ ಜನರ ಮೇಲೆ ಗುಂಡಿನ ಸುರಿಮಳೆ ಆರಂಬಿsಸಲು ಕರೆ ಕೊಟ್ಟ. ವಿಕಟ ಅಟ್ಟಹಾಸದಿಂದ ಭಾರತೀಯರ ರಕ್ತದ ‘ಓಕುಳಿ’ಯಾಟ ಆಡಿದ. ಜಲಿಯನ್ ವಾಲಾಬಾಗ್‌ಗೆ ಇದ್ದ ಒಂದೇ ಒಂದು ಚಿಕ್ಕ ಬಾಗಿಲಿನ ಮೂಲಕವೂ ಯಾರೂ ಹೊರ ಹೋಗದಂತೆ ಅವನ ಪಡೆ ಗುಂಡು ಹಾರಿಸುತ್ತಿತ್ತು. ಪ್ರ್ರಾಣಭಯದಿಂದ ದಿಕ್ಕಪಾಲಾದ ಜನರು ಅಲ್ಲೆ ಇದ್ದ ಪಾಳುಬಾವಿಯೊಂದರಲ್ಲಿ ಬಿದ್ದು ಅಸು ನೀಗಿದರು. ಮಾರಣ ಹೋಮ ಮುಗಿಯುವ ವೇಳೆಗೆ ೩೭೯ ಜನರ ಪಾಣ ಪಕ್ಷಿ ಹಾರಿಹೋಗಿತ್ತು. ೧೧೩೭ ಮಂದಿ ಗಾಯಗೊಂಡಿದ್ದರು. ೧೬೫೦ ಸುತ್ತು ಗುಂಡುಗಳನ್ನು ಹಾರಿಸಲಾಗಿತ್ತು. ಗಾಯಾಳುಗಳಿಗೆ ವೈದ್ಯಕೀಯ ನೆರವು ದೊರೆಯದಂತೆ ಇಡೀ ನಗರದಲ್ಲಿ ನಿಷೇಧಾe ಜಾರಿ ಮಾಡಿದ್ದ.
ಇದಾದ ೨೩ ದಿನಗಳ ನಂತರ ಭಗತ್ ಶಾಲೆಯಿಂದ ಮನೆಗೆ ಹಿಂದಿರುಗಲೇ ಇಲ್ಲ. ಜಲಿಯನ್ ವಾಲಾಬಾಗ್ ಅವನನ್ನು ಆಯಸ್ಕಾಂತದಂತೆ ಸೆಳೆದಿತ್ತು. ಹೆಗಲಿಗೆ ಒಂದು ಚೀಲ ಹಾಕಿಕೊಂಡು ರೈಲು ಹತ್ತಿ ಅಮೃತಸರಕ್ಕೆ ಹೊರಟಿದ್ದ ಭಗತ್‌ಸಿಂಗ್ ನೇರ ಅಲ್ಲಿಗೆ ತಲುಪಿದ. ಮೊದಲೇ ಮನಸ್ಸು ನೋವಿನ ಮಡುವಿನಲ್ಲಿತ್ತು. ನರಮೇಧ ನಡೆದ ಸ್ಥಳವನ್ನು ಸ್ಪರ್ಶಿಸಿದಾಗ ಕಣ್ಣೀರಿನ ಕಟ್ಟೆಯೊಡೆಯಿತು. ನಿಧಾನವಾಗಿ ರುದಭೂಮಿ ಸುತ್ತು ಹೊಡೆದು, ಗೋಡೆಗಳಲ್ಲಿ ಗುಂಡುಗಳು ಉಂಟು ಮಾಡಿದ್ದ ಗುರುತುಗಳನ್ನು ನೋಡಿದ. ಹತ್ತಾರು ಜೀವಿಗಳನ್ನು ನುಂಗಿದ್ದ ಪಾಳು ಭಾವಿಯನ್ನು ಬಗ್ಗಿ ನೋಡಿದ. ತನ್ನ ದೇಶ ಬಾಂಧವರ ರಕ್ತದ ಕೋಡಿ ಹರಿದು ಮೈದಾನದ ತುಂಬ ಅಲ್ಲಲ್ಲಿ ರಕ್ತ ಹೆಪುಗಟ್ಟಿ ನಿಂತಿದ್ದನ್ನು ನೋಡಿದ. ತನ್ನ ಚೀಲದಿಂದ ಡಬ್ಬಿಯನ್ನು ತೆಗೆದು ಅದರಲ್ಲಿ ರಕ್ತಸಿಕ್ತ ಮಣ್ಣನ್ನು ಸಂಗಹಿಸಿದ ಮಣ್ಣನ್ನು ಎತ್ತಿಕೊಂಡು ಹಣೆಗೆ ವಿಭೂತಿಯಂತೆ ಹಚ್ಚಿಕೊಂಡ. ಅಂದು ಭಗತ್ ತನ್ನ ಬಾಳಿಗೆ ಹೊಸ ದೀಕ್ಷೆಯನ್ನು ಪಡೆದುಕೊಂಡ.
ಕ್ರ್ರಾಂತಿಯ ಮನೋಭಾವವುಳ್ಳ ಭಗತ್‌ಗೆ ಪ್ರ್ರೊ.ಜಯಚಂದ ವಿದ್ಯಾಶಂಕರರು ಪಸಿದ್ಧ ಕ್ರಾಂತಿಕಾರಿಗಳನ್ನು ಪರಿಚಯಿಸಿದರು. ಇದರಿಂದ ಕಾಂತಿಕಾರಿ ಚಟುವಟಿಕೆಗಳ ನಾಯಕತ್ವವನ್ನು ಭಗತ್ ಹೊರುವಂತಾಯಿತು.
ಅತ್ಯಂತ ದೊಡ್ಡ ಅಹಿಂಸಾತ್ಮಕ ಚಳವಳಿಯಾದ ಅಸಹಕಾರ ಚಳವಳಿಗೆ ಗಾಂದಿsಜೀ ಕರೆ ಇತ್ತರು. ಈ ಕರೆಗೆ ಓಗೊಟ್ಟು ಹಲವಾರು ಮಂದಿ ಭಾಗವಹಿಸಿದ್ದರು. ಗೋರಖ್‌ಪುರದ ಚೌರಿಚೌರಾದ ಗ್ರ್ರಾಮಸ್ಥರು ಹಿಂಸಾಚಾರಕ್ಕೆ ತೊಡಗಿದ್ದಕ್ಕೆ ಚಳವಳಿಯನ್ನು ಹಿಂತೆಗೆಯಲಾಯಿತು. ಇಂದರಿಂದ ಕುಪಿತನಾದ ಭಗತ್‌ಸಿಂಗ್ ಅಹಿಂಸೆಯ ಮೇಲೆ ನಂಬಿಕೆಯನ್ನು ಕಳೆದುಕೊಂಡ. ತನ್ನ ಕ್ರ್ರಾಂತಿ ನಿಲುವನ್ನು ಸಮರ್ಥಿಸಿಕೊಂಡ.
೧೯೨೮ರ ಅಕ್ಟೋಬರ್ ೩. ಸರ್‌ಜಾನ್ ಆಲ್ಸ್‌ಬ್ರ್ರೂಕ್ ಸೈಮನ್ ನೇತೃತ್ವದ ಏಳು ಜನರ ಸಮಿತಿಯ ವಿರುದ್ಧ ಪತಿಭಟನೆ ಮಾಡಲಾಯಿತು. ಈ ಸಮಿತಿಯು ಭಾರತ ಮತ್ತಷ್ಟು ಸಂವಿಧಾನ ಸುಧಾರಣೆಗೆ ಸಿದ್ಧವಾಗಿದೆಯೇ ಇಲ್ಲವೇ ಎಂದು ಪರಿಶೀಲಿಸುವುದಾಗಿತ್ತು. ಈ ಸಮಿತಿಯನ್ನು ಬಹಿಷ್ಕರಿಸುವಂತೆ ಗಾಂದಿsಜಿ ಕರೆ ಕೊಟ್ಟರು. ಲಾಹೋರಿನ ರೈಲು ನಿಲ್ದಾಣದಲ್ಲಿ ಸಮಿತಿಯ ಸದಸ್ಯರು ಹೊರ ಬರುತ್ತಿದ್ದಂತೆ ಭಗತ್‌ಸಿಂಗ್ ಆಯ್ಕೆ ಮಾಡಿದ ಘೋಷಣೆಯನ್ನು ಮೊದಲ ಬಾರಿಗೆ ಪತಿಭಟನಾಕಾರರು ‘ಇಂಕ್ವಿಲಾಬ್ ಜಿಂದಾಬಾದ್’ ಎಂದು ಕೂಗಿದರು. ಪತಿಭಟನಾಕಾರರ ಮುಂಚೂಣಿಯಲ್ಲಿ ಲಾಲಾ ಲಜಪತ್‌ರಾಯ್ ಇದ್ದರು.
ಗುಂಪು ಗೋಡೆಯಂತೆ ಸಮಿತಿಯು ಒಂದಡಿ ಇಡದಂತೆ ತಡೆಯಿತು. ಪೆಲೀಸರು ಗುಂಪನ್ನು ಚದುರಿಸಲು ಮಾಡಿದ ಪಯತ್ನಗಳೆಲ್ಲ ವಿಫಲವಾಯಿತು. ಪೆಲೀಸ್ ಸೂಪರಿಂಟೆಂಡೆಂಟ್ ಜೆ.ಎ. ಸ್ಕಾಟ್ ಲಾಠಿ ಚಾರ್ಜ್‌ಗೆ ಅನುಮತಿಯನ್ನು ನೀಡಿದನು. ಇದರಿಂದ ಗುಂಪು ದಿಕ್ಕಾಪಾಲಾಯಿತು. ಲಜಪತರಾಯರನ್ನು ಗುರ್ತಿಸಿ ಸ್ಕಾಟ್ ರಕ್ತ ಚಿಮ್ಮುವಂತೆ ಬಾರಿಸಿದ. ನೆಲಕ್ಕೆ ಬಿದ್ದ ಲಜಪತರಾಯ್ ಯಾತನೆಯಿಂದ ಜೋರಾಗಿಯೇ ನರಳಿದರು. ಈ ದೃಶ್ಯವನ್ನು ಕಂಡ ಭಗತ್‌ಸಿಂಗ್ ಸ್ಕಾಟ್‌ಗೆ ತಕ್ಕ ಗೌರವವನ್ನು ಸಲ್ಲಿಸುವುದರ ಬಗ್ಗೆ ಚಿಂತಿಸಿದ.
ಎಚ್‌ಎಸ್‌ಆರ್‌ಎ ಕ್ರ್ರಾಂತಿಕಾರಿ ಪಕ್ಷದ ಹಿರಿಯ ಸದಸ್ಯರಾದ ರಾಜಗುರು, ಸುಖದೇವ್, ಘಟಕದ ಮುಖ್ಯಸ್ಥ ಆಜಾದ್, ಭಗತ್‌ಸಿಂಗ್ ಸಭೆ ಸೇರಿ ಸ್ಕಾಟ್ ಕೊಲ್ಲುವ ತೀರ್ಮಾನ ಮಾಡಲಾಯಿತು. ಸ್ಕಾಟ್‌ನನ್ನು ಗುರುತಿಸಲು ಜೈಗೋಪಾಲ್‌ನನ್ನು ನಿಯೋಜಿಸಲಾಯಿತು. ಆದರೆ ಜೈಗೋಪಾಲ್ ಸ್ಕಾಟ್‌ನ ನೋಡಿಯೇ ಇರಲಿಲ್ಲ. ವಿಚಿತವೆಂದರೆ ಇದನ್ನು ಯಾರಿಗೂ ಹೇಳಿರಲಿಲ್ಲ. ಇದರ ಪರಿಣಾಮ ಡಿಸೆಂಬರ್ ೧೭ರಂದು ಮಧ್ಯಾಹ್ನ ಸ್ಕಾಟ್ ಎಂದು ತಿಳಿದು ಸಾಂಡರ‍್ಸ್‌ನ ಹತ್ಯೆ ನಡೆಯಿತು. ಈ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಆಜಾದ್, ಭಗತ್, ರಾಜಗುರು ಅಲ್ಲಿಂದ ಕಲ್ಕತ್ತಾಕ್ಕೆ ಪರಾರಿಯಾದರು.
ಅಲ್ಲಿ ನಿಷ್ಠಾವಂತ ಕ್ರ್ರಾಂತಿಕಾರಿ ಜಿತೇಂದನಾಥ್ ದಾಸ್ ಮತ್ತು ಬಂಗಾಳದ ಲಲಿತ್ ಮುಖರ್ಜಿಯನ್ನು ಭಗತ್‌ಸಿಂಗ್ ಭೇಟಿ ಮಾಡಿದನು.
ಕ್ರ್ರಾಂತಿಕಾರಿಗಳು ತಮ್ಮ ಮೂಲ ಉದ್ದೇಶವನ್ನು ಜನರಿಗೆ ತಿಳಿಸುವ ಇಚ್ಚೆಯನ್ನು ಹೊಂದಿದ್ದರು. ಅಸೆಂಬ್ಲಿಯ ಹೊರಗೆ ಪತಿಭಟನೆ ಮಾಡುವುದಕ್ಕಿಂತ ಒಳಗೆ ಶಾಂತಿಯುತ ಮಾರ್ಗದಲ್ಲಿ ಅನುಸರಿಸುವುದು ಒಳ್ಳೆಯದೆಂಬ ಅಬಿsಪ್ರಾಯವನ್ನು ತಳೆದಿದ್ದರು. ಇದರಿಂದ ಕ್ರಾಂತಿಕಾರಿಗಳೆಂದರೆ ಕೊಲ್ಲುವವರ ಒಂದು ತಂಡ ಎಂಬ ಬ್ರಿಟೀಷರ ತಪ್ಪು ಕಲ್ಪನೆ ತಡೆಯಬಹುದಾಗಿತ್ತು ಎಂದು ಚರ್ಚಿಸುವ ಸಲುವಾಗಿ ಎಚ್‌ಎಸ್‌ಆರ್‌ಎ ಔಪಚಾರಿಕ ಸಭೆಯೊಂದನ್ನು ಕರೆಯಲಾಗಿತು.
ಮುಂದಿನ ಕಾರ್ಯತಂತದಲ್ಲಿ ಅಸೆಂಬ್ಲಿ ಹಾಲ್‌ನ ಸಾರ್ವಜನಿಕರ ಗ್ಯಾಲರಿಯಿಂದ ಬಾಂಬ್ ಹಾಕುವುದರ ಬಗ್ಗೆ ತೀರ್ಮಾನಿಸಲಾಯಿತು. ಈ ಕಾರ್ಯಕ್ಕೆ ಬಿ.ಕೆ.ದತ್ತ ಮತ್ತು ರಾಂ ಶರಣ್‌ದಾಸ್ ಹೆಸರನ್ನು ಸೂಚಿಸಲಾಯಿತು. ಆಗ ಭಗತ್ ಬಾಂಬ್ ಎಸೆಯಲು ತಾನು ಸಿದ್ಧನಿದ್ದೇನೆಂದು ಹೇಳಿದ. ಬಾಂಬನ್ನು ಎಸೆದ ನಂತರ ತಪ್ಪಿಸಿಕೊಳ್ಳುವುದಾದರೆ ಭಗತ್ ಹೆಸರನ್ನು ಪರಿಶೀಲಿಸಬಹುದು ಎಂದು ಸಭೆಯು ತಿಳಿಸಿತು. ಭಗತ್ ಇದಕ್ಕೆ ಒಪ್ಪಲಿಲ್ಲ.
‘ಸಮುದಾಯದ ಪeಯಲ್ಲಿ ಪರಿಣಾಮ ಬೀರಿದ್ದು ಬಿಟ್ಟರೆ ಯಾವುದೇ ಕ್ರ್ರಾಂತಿಯ ಬೇರು ಉಳಿದಿಲ್ಲ. ಜನರಿಗೆ ಕ್ರ್ರಾಂತಿಕಾರಿಯ ರಾಷ್ಟ್ರಪೆಮದ ಚಿಂತನೆಗಳನ್ನು ತಿಳಿಸಬೇಕು. ಕ್ರ್ರಾಂತಿಕಾರಿಗಳ ಉದ್ದೇಶವನ್ನು ತಿಳಿಸಬೇಕು’ ಎಂದು ಭಗತ್ ಸಭೆಯ ಮನವೆಲಿಕೆಗೆ ಪಯತ್ನ ಪಟ್ಟು ಯಶಸ್ವಿಯಾದ.
೧. ದೇಶದ ಕಾರ್ಮಿಕ ಶಕ್ತಿಯನ್ನು ಅಡಗಿಸುವುದು. ೨ ತನಗಿಷ್ಟ ಬಂದಾಗ, ಇಷ್ಟಬಂದವರನ್ನು ಯಾವ ಮುನ್ಸೂಚನೆಯೂ ಇಲ್ಲದೆ ಸೆರೆಮನೆಯಲ್ಲಿ ಇಡುವುದು. ಈ ಎರಡನ್ನು ೧೯೨೯ ಏಪ್ರ್ರಿಲ್ ೮ರಂದು ಕೇಂದ್ರೀಯ ಶಾಸನ ಸಭೆಯಲ್ಲಿ ಮಂಡಿಸಲು ಸರ್ಕಾರ ಕಾರ್ಯಕಮವನ್ನು ಹಮ್ಮಿಕೊಂಡಿತ್ತು.
ಅಂದು ಬೆಳಿಗ್ಗೆ ೧೧ಕ್ಕೆ ಅದಿsವೇಶನ ಪಾರಂಭಗೊಳ್ಳುವ ಮುಂಚೆ ಭಗತ್ ಮತ್ತು ಬಟುಕೇಶ್ವರ ದತ್ತರು ಖಾಕಿ ಚೆಡ್ಡಿಗಳನ್ನು ಕೋಟನ್ನು ಧರಿಸಿಕೊಂಡು ಸಾರ್ವಜನಿಕರ ಗ್ಯಾಲರಿಯನ್ನು ಪವೇಶಿಸಿದರು. ಕೋಟಿನೊಳಗೆ ಬಾಂಬುಗಳು, ಕರಪತಗಳು ಅಡಗಿದ್ದವು.
ಪಶ್ನೋತರ ಕಾಲ ಮುಗಿಯಿತು. ಪರ್ವ ನಿರ್ಧಾರದಂತೆ ಎರಡು ಮಸೂದೆಗಳ ಮತಗಣನೆ ನಡೆದಾಗ ಭಾರಿ ಬಹುಮತದಿಂದ ಪರಾಭವಗೊಂಡವು. ತಕ್ಷಣ ಸಾರ್ವಜನಿಕರ ಗ್ಯಾಲರಿಯಲ್ಲಿದ ಭಗತ್‌ಸಿಂಗ್ ಮೊದಲ ಬಾಂಬನ್ನು ಎಚ್ಚರದಿಂದ ಎಸೆದ. ದೊಡ್ಡ ಸದ್ದಿನೊಂದಿಗೆ ಅದು ಸ್ಫೋಟಗೊಂಡಿತು. ಮರುಕ್ಷಣದಲ್ಲಿಯೇ ದತ್ತ ಮತ್ತೊಂದು ಬಾಂಬ್ ಎಸೆದ. ದಟ್ಟ ಕಪ್ಪು ಹೊಗೆ ಸದನದ ತುಂಬ ಆವರಿಸಿತು. ಜೀವಭಯದಿಂದ ಸದಸ್ಯರೆಲ್ಲ ಓಡಲಾರಂಬಿsಸಿದರು. ಅವರು ತಂದಿದ್ದ ಕರಪತಗಳನ್ನು ಸಭಾ ಭವನದಲ್ಲಿ ತೂರಿದರು. ‘ಇಂಕಿಲಾಬ್ ಜಿಂದಾಬಾದ್’ ಎಂಬ ಘೋಷಣೆಯನ್ನು ಕೂಗಿದರು.
ಕರಪತದಲ್ಲಿ ನಮ್ಮ ಈ ಕಾರ್ಯದ ಉದ್ದೇಶ ಮತ್ತು ಅವಶ್ಯಕತೆಗಳನ್ನು ಪಭಾವಿಯಾಗಿ ಹೇಳಬೇಕೆಂದರೆ ಮಾತುಗಳಲ್ಲೇ ಸಾಧ್ಯ. ಕಿವುಡನನ್ನು ಎಚ್ಚರಿಸಬೇಕಾದರೆ ಭಯಂಕರ ಸ್ಫೋಟಗಳ ಅವಶ್ಯಕತೆ ಇದೆ’. ಈ ಪರಕೀಯ ದುರಾಡಳಿತಗಾರರ ನೈಜ ಸ್ವರೂಪವನ್ನು ಮರೆಸುವ ಕಾನೂನು ಮತ್ತು ನ್ಯಾಯಾಂಗಗಳ ಮುಖವಾಡವನ್ನು ಕಿತ್ತೆಸೆಯುವುದು. ಪರಮ ಕರ್ತವ್ಯ ಎಂಬುದು ನಮ್ಮ ಅಚಲ ನಂಬಿಕೆ. ಈ ವಿದೇಶಿ ಪಭುತ್ವಕ್ಕೆ ಇಲ್ಲಿಯ ಮಣ್ಣಿನ ಮಕ್ಕಳ ಪರವಾಗಿ ನಾವು ಹೇಳಬೇಕಾದ ಮಾತೊಂದಿದೆ. ಸಾರ್ವಜನಿಕ ರಕ್ಷಣಾ ಮಸೂದೆ. ವ್ಯಾಪಾರ ವಿವಾದ ಮಸೂದೆ ಹಾಗು ಲಾಲಾ ಲಜಪತರಾಯರ ಕೂರ ಹತ್ಯೆಯ ಕೃತ್ಯವನ್ನು ಖಂಡಿಸಿ ಪತಿಭಟಿಸುವ ಸಲುವಾಗಿ ನಾವು ಇಲ್ಲಿ ಬಾಂಬ್ ಎಸೆದಿದ್ದೇವೆ.
ಮಾನವನ ರಕ್ತ ಪವಿತವಾದದು ಎಂಬುದು ನಮ್ಮ ಅಚಲ ನಂಬಿಕೆ. ಪತಿಯೊಬ್ಬ ಮನುಷ್ಯನಿಗೆ ಸಂಪರ್ಣ ಸ್ವಾತಂತ ಹಾಗು ಶಾಂತಿ ಇರುವಂತಹ ಭವ್ಯ ಭವಿಷ್ಯವನ್ನು ನಂಬಿರುವ ನಾವು ಮಾನವ ರಕ್ತವನ್ನು ಹರಿಸಬೇಕಾಗಿ ಬಂದಿರುವುದರಿಂದ ನಮಗೆ ಬಹಳ ದುಃಖವಾಗುತ್ತಿದೆ. ಆದರೆ ಎಲ್ಲರಿಗೂ ಸಮಾನ ಸ್ವಾತಂತವನ್ನು ತಂದುಕೊಡಲು ಮತ್ತು ಮಾನವನಿಂದ ಸಹ ಮಾನವನ ಸುಲಿಗೆಯನ್ನು ನಿಲ್ಲಿಸಿ ಮಂಗಳ ಹಾಡಲು ಸ್ವಲ್ಪ ರಕ್ತ ಪಾತವಾಗಬೇಕಾದ್ದು ಅವಶ್ಯಕ. ಕ್ರ್ರಾಂತಿಯು ಚಿರಾಯುವಾಗಲಿ ಎಂದು ಬರೆಯಲಾಗಿತ್ತು.
ಬಾಂಬ್ ಎಸೆದ ಮೇಲೆ ಭಗತ್‌ಸಿಂಗ್ ಮತ್ತು ದತ್ತ ತಪ್ಪಿಸಿಕೊಳ್ಳಲು ಯತ್ನಿಸಲಿಲ್ಲ. ಮೊದಲೇ ನಿರ್ಧರಿಸಿದ್ದಂತೆ ಪೆಲೀಸರಿಗೆ ಶರಣಾದರು. ಸಾಂಡರ‍್ಸ್ ಕೊಲೆಗೆ ಬಳಸಿದ್ದ ಪಿಸ್ತೂಲ್ ಅನ್ನು ಭಗತ್ ಪೆಲೀಸರಿಗೆ ಒಪ್ಪಿಸಿದ. ಸಾಂಡರ‍್ಸ್‌ನನ್ನು ಕೊಂದವರಲ್ಲಿ ಭಗತ್‌ಸಿಂಗ್ ಕೂಡ ಒಬ್ಬನೆಂದು ಅವರು ಶಂಕಿಸಿದರು.
ಸಾಂಡರ‍್ಸ್ ಕೊಲೆಯಲ್ಲಿ ಸಾರಿದ ಬಿತ್ತಿ ಪತಗಳನ್ನು ಮತ್ತು ಕರಪತದಲ್ಲಿ ಬಳಸಿದ ಭಾಷೆಯನ್ನು ಪರಿಶೀಲಿಸಿದಾಗ ಕೆಲವು ಸಾಮ್ಯಗಳಿದ್ದವು. ಇದರಿಂದ ಭಗತ್ ವಿರುದ್ಧ ಭಾರತೀಯ ದಂಡ ಸಂಹಿತೆ ಕಾಯ್ಡೆ ೩೦೭ ಮತ್ತು ಸ್ಫೋಟಕ ವಸ್ತುಗಳ ಕಾಯ್ಡೆ ೩ರ ಪಕಾರ ಆಪಾದನೆಗಳನ್ನು ರೂಪಿಸಿದರು.
ನಂತರ ವಿಚಾರಣೆ ನಡೆಸಿದ ನ್ಯಾಯಾಲಯವು ಭಗತ್‌ಸಿಂಗ್‌ನನ್ನು ಗಲ್ಲುಗಂಭಕ್ಕೆರಿಸುವಂತೆ ತೀರ್ಪನ್ನು ನೀಡಿತು.
ಭಗತ್‌ಸಿಂಗ್, ಸುಖದೇವ್ ಮತ್ತು ರಾಜಗುರುರವರನ್ನು ನೇಣಿಗೇರಿಸುವ ಮುನ್ನ, ಈ ಮೂವರಿಗೆ ಶಿಕ್ಷೆಯಿಂದ ವಿನಾಯಿತಿ ದೊರೆಯಲಾಗುವುದು ಎಂದು ಆಶಾಭಾವನೆ ಜನರಲ್ಲಿ ದಟ್ಟವಾಗಿ ಹಬ್ಬಿತ್ತು. ಗಾಂದಿsಜಿ ಇರ್ವಿನ್ ಒಪ್ಪಂದವನ್ನು ಮುರಿಯುವ ಬೆದರಿಕೆಯನ್ನು ಒಡ್ಡಿದ್ದರೆ, ಈ ಮೂವರ ಗಲ್ಲುಶಿಕ್ಷೆ ಜೀವಾವದಿs ಶಿಕ್ಷೆಯಾಗಿ ಮಾರ್ಪಡಿಸಬಹುದಾಗಿತ್ತು. ಆದರೆ ಅದು ಸಾಧ್ಯವಾಗಲಿಲ್ಲ.
ಭಗತ್‌ಸಿಂಗ್ ತಾನು ಸಾಯುವ ಮುನ್ನ ತನ್ನ ತಾಯಿಗೆ ಮಾ, ನಾನು ಸತ್ತ ಮೇಲೆ ಈ ದೇಶಕ್ಕೆ ಮುಂದೊಂದು ದಿನ ಸ್ವಾತಂತ ಬರುವುದು ಖಂಡಿತ. ಆದರೆ ಬಿಳಿ ಮುಖಗಳ ಕುರ್ಚಿಗೆ ಕಂದು ಮುಖಗಳು ಅವರಿಸುವರು. ಇದರಿಂದ ಈಗಿನ ವ್ಯವಸ್ಥೆ ಬದಲಾಗುವುದಿಲ್ಲ’ ಎಂದು ಹೇಳಿದ ಮಾತು ನಿಜವಾದುದು ಮಾತ್ರ ಈ ದೇಶದ ದುರಂತ.

Thursday, August 6, 2009

ಬದಲಾಗದ ಜಗ-ಜನ


ನಾನು ಸೋತಾಗ,
ಗಹಗಹಿಸಿ ನಕ್ಕರು
ನಾನು ಗೆದ್ದಾಗಲೂ
ಅದೇ ನಗು (ವ್ಯಂಗ್ಯಭರಿತ)
'ಇದೇನೂ ಮಹಾ!' ಎಂದು.